Poornaprajna Kshetra

|| Moolaramo Vijayate ||

|| Gururajo Vijayate ||

Poorna Prajna Kshetra - Sri Raghavendra Swamy Mutt

Poorna Prajna Kshetra
Sri Raghavendra Swamy Mutt

P.P. Layout, Bengaluru

ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ

This is the only song written by Raghavendra theertharu.

ಇಂದು ಎನಗೆ ಗೋವಿಂದ ನಿನ್ನ ಪಾದಾರ-

ವಿಂದವ ತೋರೋ ಮುಕುಂದ ।।ಪ।।

ಸುಂದರ ವದನನೆ ನಂದಗೋಪನ ಕಂದ

ಮಂದರೋದ್ಧರ ಆನಂದ ಇಂದಿರಾ ರಮಣ ।।ಅ.ಪ।।

ನೊಂದೆನಯ್ಯ ಭವಬಂಧನದೊಳು ಸಿಲುಕಿ

ಮುಂದೆ ದಾರಿ ಕಾಣೆದೆ ಕುಂದಿದೆ ಜಗದೊಳು

ಕಂದನು ಎಂದೆನ್ನ ಕುಂದುಗಳೆಣಿಸದೆ

ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ।।೧।।

ಮೂಢತನದಿ ಬಹು ಹೇಡಿ ಜೀವ ನಾನಾಗಿ

ದೃಢಭಕುತಿಯನು ಮಾಡಲಿಲ್ಲವೊ ಹರಿಯೆ

ನೋಡಲಿಲ್ಲವೋ ನಿನ್ನ ಪಾಡಲಿಲ್ಲವೋ ಮಹಿಮೆ

ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ।।೨।।

ಧಾರುಣಿಯೊಳು ಭೂಭಾರ ಜೀವ ನಾನಾಗಿ

ದಾರಿತಪ್ಪಿ ನಡೆದೆ ಸೇರಿದೆ ಕುಜನರ

ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ

ಧೀರವೇಣುಗೋಪಾಲ ಪರಗಾಣಿಸೊ ಹರಿಯೆ ।।೩।।

 

 

Indu Enage Govinda ninna padaara

Vindava toro mukundane

Sundara vadanane nandagopana Kanda

mandarodhara aananda indiara ramana||

Nondenayya naa bhavabandhanadolu siluki

munde daari kaanade kundide jagadolu

kandanantendenna kundugalenisade

tande kayo Krishna kandarpa janakane||1||

Mudhatanadi balu hedi jivananaagi

drudhabhakutiyanu maadalillavo hariye

nodalillavo ninna paadalillavo mahime

gaadikaara Krishna bedikombeno ninna ||2||

Dhaarunilolu bhubhaara jivananaagi

daari tappi nadede seride kujanara

aaru kaayuvavarilla seride ninagayya

dhira venugopala paarugaaniso hariye||3||

Sri Raghavendra Teertharu

ಶ್ರೀ ರಾಘವೇಂದ್ರಸ್ವಾಮಿಗಳ ಜೀವನದ ಸಂಕ್ಷಿಪ್ತ ಮಾಹಿತಿ

ಮೂಲರೂಪ : ಶಂಕುಕರ್ಣ

ಅವತಾರಗಳು : ಶ್ರೀ ಪ್ರಹ್ಲಾದರಾಜರು, ಶ್ರೀ ಬಾಹ್ಲೀಕರಾಜರು, ಶ್ರೀ ವ್ಯಾಸರಾಜರು

ಮನೆತನ : ಷಾಷ್ಠಿಕ ವಂಶದ ಬೀಗಮುದ್ರೆ ಮನೆತನ

ಗೋತ್ರ : ಗೌತಮ

ತಂದೆ : ಶ್ರೀ ತಿಮ್ಮಣ್ಣ ಭಟ್ಟರು

ತಾಯಿ : ಶ್ರೀಮತಿ ಗೋಪಿಕಾಂಬಾ

ಜನನ : ಕ್ರಿ.ಶ 1595 ನೇ ಮನ್ನಥನಾಮ ಸಂವತ್ಸರದ ಫಾಲ್ಗುಣ ಶುಧ ಗುರುವಾರ ಸಪ್ತಮಿ

ಜನ್ಮ ನಕ್ಷತ್ರ : ಮೃಗಶಿರಾ

ಜನ್ಮ ಸ್ಥಳ : ಭುವನಗಿರಿ (ತಮಿಳುನಾಡು)

ಪೂರ್ವಾಶ್ರಮದ ಹೆಸರು : ಶ್ರೀ ವೆಂಕಟನಾಥ

ಗುರುಗಳು : ಶ್ರೀ ಲಕ್ಷ್ಮೀನರಸಿಂಹಾಚಾರ್ಯರು

ಉಪನಯನ : ಕ್ರಿ.ಶ 1614 ನೇ ಆನಂದನಾಮ ಸಂವತ್ಸರ

ಉನ್ನತ ವಿದ್ಯಾಭ್ಯಾಸ : ಶ್ರೀ ಸುಧೀಂದ್ರತೀರ್ಥ ರಲ್ಲಿ (ಕುಂಭಕೋಣ)

ವಿವಾಹ : ಶ್ರೀಮತಿ ಸರಸ್ವತಿಬಾಯಿ

ಪೂರ್ವಾಶ್ರಮದ ಪುತ್ರರು : ಶ್ರೀ ಲಕ್ಷ್ಮೀನಾರಾಯಣಾಚಾರ್ಯರು

ಸನ್ಯಾಸಿಯಾಗಲು ಸ್ವಪ್ನ ಸೂಚನೆ : ವಿದ್ಯಾದೇವಿಯಾದ ಸರಸ್ವತಿ ದೇವಿಯಿಂದ

ಸನ್ಯಾಸ ಸ್ವೀಕಾರ : ಕ್ರಿ.ಶ 1621 ನೇ ದುರ್ಮತಿನಾಮ ಸಂವತ್ಸರದ ಫಾಲ್ಗುಣ ಶುದ್ಧ ಬಿದಿಗೆ

ಆಶ್ರಮ ನಾಮ : ಶ್ರೀ ರಾಘವೇಂದ್ರತೀರ್ಥರು

ಆಶ್ರಮ ಗುರುಗಳು : ಶ್ರೀ ಸುಧೀಂದ್ರತೀರ್ಥರು

ಗ್ರಂಥಗಳು : ಶ್ರೀ ಮನ್ನ್ಯಾಯಸುಧಾ ಪರಿಮಳ ಇತ್ಯಾದಿ 48 ಗ್ರಂಥಗಳು

ಬಿರುದುಗಳು : ಮಹಾಭಾಷ್ಯ ವೆಂಕಟನಾಥಾಚಾರ್ಯ, ಪರಿಮಳಾಚಾರ್ಯ

ಆಶ್ರಮ ಶಿಷ್ಯರು : ಶ್ರೀ ಯೋಗೀಂದ್ರತೀರ್ಥರು

ಬೃಂದಾವನ ಪ್ರವೇಶ : ಕ್ರಿ.ಶ 1671 ನೇ ವಿರೋಧಿನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆ, ಶುಕ್ರವಾರ

ಬೃಂದಾವನ ಸ್ಥಳ : ತುಂಗಭದ್ರಾ ನದಿತೀರ (ಮಂತ್ರಾಲಯ)